೬೯ನೇ ಗಣರಾಜ್ಯೋತ್ಸವ ಆಚರಣೆ

೬೯ನೇ ಗಣರಾಜ್ಯೋತ್ಸವ ಆಚರಣೆ


ಒಂದು ದೇಶವನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಸಂವಿಧಾನ ಅತ್ಯವಶ್ಯಕ – ಆರ್.ಹೆಚ್ ಅತ್ತನೂರ
ಕೊಪ್ಪಳ : ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿ ಇರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೬೯ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಆರ್.ಹೆಚ್ ಅತ್ತನೂರ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಅಗಸ್ಟ ೧೫ ೧೯೪೭ ರಂದು ಭಾರತ ಸ್ವಾತಂತ್ರವಾದ ನಂತರ ಅಗಸ್ಟ ೨೯ ರಂದು ಡಾ|| ಬಿ.ಆರ್. ಅಂಬೇಡ್ಕರವರ ನೇತೃತ್ವದಲ್ಲಿ ೨ ಸಮಿತಿ ಇತ್ತು ಈ ಸಮಿತಿಯ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವ್ಹಂಬರ ೪ ೧೯೪೭ ರಂದು ಶಾಸನ ಸಭೆಯಲ್ಲಿ ಮಂಡಿಸಿತು.
೨೬ ನವ್ಹಂಬರ ೧೯೪೯ ರಂದು ಅಂಗಿಕರಿಸಲ್ಪಟ್ಟಿತು. ಅನೇಕ ಪರಿಶೀಲನೆಗಳ ಮತ್ತು ತಿದ್ದುಪಡಿಗಳ ನಂತರ ೨೬ ಜನವರಿ ೧೯೫೦ ರಂದು ಭಾರತ ಸಂವಿಧಾನ ಜಾರಿಗೆ ಬಂದಿತು. ಭಾರತ ಸ್ವಾತಂತ್ರ ಚಳುವಳಿಯಲ್ಲಿ ೨೬ ಜನವೇರಿ ೧೯೨೯ ರಂದು ಭಾರತ ರಾಷ್ಟ್ರೀಯ ಕಾಂಗ್ರೇಸ್ ಪೂರ್ಣ ಸ್ವಾರಜ್ಯ ದ್ಯೇಯವನ್ನು ಹಾಕಿಕೊಂಡಿತ್ತು. ಲಾಹೋರನಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯದಿನವೆಂದು ಘೋಷಿಸಲಾಯಿತು. ಇದೇ ಕಾರಣಕ್ಕಾಗಿ ಸ್ವಾತಂತ್ರ ನಂತರ ಭಾರತದ ಸಂವಿಧಾನವನ್ನು ಈ ದಿನದಂದೆ ಜಾರಿಗೆ ತರಲಾಯಿತು ಎಂದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಆಪ್ರೀನ್, ರೇಣುಕಾ, ಜ್ಯೋತಿ ಶಿವಬಸಯ್ಯನವರು ಮಾತನಾಡಿದರು. ಜಿ.ಎಸ್ ಹಿರೇಗೌಡ್ರು ನಿರೂಪಿಸಿದರು, ಶಿಕ್ಷಕ ದೇವಪ್ಪ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರು, ಶಿಕ್ಷಕವೃಂದದವರು ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*

Scroll To Top

Share this