ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಬೇಕಾಗಿರುವ ಅಸ್ತ್ರಗಳೆಂದರೆ ನಿರಂತರ ದುಡಿಮೆ ಮತ್ತು ತಾಳ್ಮೆ – ಅಭಿನವ ಗವಿಶ್ರೀಗಳು

ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಬೇಕಾಗಿರುವ ಅಸ್ತ್ರಗಳೆಂದರೆ ನಿರಂತರ ದುಡಿಮೆ ಮತ್ತು ತಾಳ್ಮೆ – ಅಭಿನವ ಗವಿಶ್ರೀಗಳು

ಕೊಪ್ಪಳ :   ನಗರದ ಬಹದ್ದೂರಬಂಡಿ ರಸ್ತೆಯಲ್ಲಿ ಇರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ನೇತಾಜಿ ಸುಭಾಶಚಂದ್ರ ಭೋಷ ವೇದಿಕೆ ಉದ್ಘಾಟಿಸಿ ಆರ್ಶಿವಚನ ನೀಡಿದ ಶ್ರೀಗಳು ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಬೇಕಾಗಿರುವ ಅಮೂಲ್ಯವಾದ ಅಸ್ತ್ರಗಳೆಂದರೆ ನಿರಂತರ ದುಡಿಮೆ ಮತ್ತು ತಾಳ್ಮೆ ಬಹಳ ಮುಖ್ಯ ಈ ದಿಶೆಯಲ್ಲಿ ಈ ಸಂಸ್ಥೆಯ ಸಂಸ್ಥಾಪಕರಾದ ಆರ್. ಹೆಚ್ ಅತ್ತನೂರ ಮತ್ತು ದಂಪತಿಗಳ ಪರಿಶ್ರಮ ಶ್ರದ್ಧೆ ಶ್ಲಾಘನೀಯ ಮಕ್ಕಳನ್ನು ನೋಡುವುದು ಅವರೊಂದಿಗೆ ಮಾತನಾಡುವುದು ಒಂದು ಖುಷಿ ಈ ಶಾಲೆಯ ಸುಂದರವಾದ ವಾತವರಣದಲ್ಲಿ ಅರಳುವ ಹೂಗಳಿಂತಿರುವ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಈ ವಾತವರಣದ ಸದುಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಸಮಾಜದ ಸತ್ಪ್ರಜೇಗಳಾಗಿ ಹೊರಹೊಮ್ಮಬೇಕೆಂದು ಆರ್ಶಿವದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಜಿ. ದಾಸರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಹ ಪಠ್ಯ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಮತ್ತು ಪ್ರತಿಭೆಗಳನ್ನು ಗುರುತಿಸಲು ಇಂತಹ ವೇದಿಕೆ ಅತ್ಯಅವಶ್ಯಕ ಇಂದು ಈ ಶಾಲೆಯಲ್ಲಿ ನೂತನವಾಗಿ ಶ್ರೀಗಳಿಂದ ಉದ್ಘಾಟನೆಗೊಂಡ ನೇತಾಜಿ ಸುಭಾಶಚಂದ್ರ ಭೋಷ ವೇದಿಕೆ ಮಕ್ಕಳಿಗೆ ಕಲಿಕೆಯ ಜೊತೆಗೆ ಸಹ ಪಠ್ಯದಲ್ಲಿ ತೊಡಗಿಸಿಕೊಳ್ಳಲು ಸೂಕ್ತವಾದ ವೇದಿಕೆ ಈ ಶಾಲೆಯ ಸುಂದರವಾದ ವಾತವರಣವನ್ನು ಮಕ್ಕಳು ಸಂಪೂರ್ಣವಾಗಿ ಬೆಳೆಸಿಕೊಳ್ಳಬೇಕು ಸುಂದರವಾದ ವಾತವರಣಕ್ಕೆ ಶ್ರಮಿಸಿದ ಶಾಲಾ ಆಡಳಿತ ಮಂಡಳಿ ಶಿಕ್ಷಕರ ಪರಿಶ್ರಮ ಶ್ಲಾಘನೀಯವಾದದ್ದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಶಂಕರಗೌಡ ಪಾಟೀಲ್, ಇತರೆ ಶಿಕ್ಷಕರು ಮತ್ತು ಶಾಲಾ ಶಿಕ್ಷಕವೃಂದದವರು ಮಕ್ಕಳು ಉಪಸ್ಥಿತರಿದ್ದರು.
ಆಶಾ ದೊಡ್ಡಮನಿ ನಿರೂಪಿಸಿದರು, ಜಿ. ಎಸ್. ಹಿರೇಗೌಡ್ರು ವಂದಿಸಿದರು.

Leave a Reply

Your email address will not be published. Required fields are marked *

*

Scroll To Top

Share this