ಶಾಲಾ ಮಕ್ಕಳ ಅಭ್ಯಾಸಕ್ಕೊಂದು ದಿನಚರಿ

ಶಾಲಾ ಮಕ್ಕಳ ಅಭ್ಯಾಸಕ್ಕೊಂದು ದಿನಚರಿ

ಕೊಪ್ಪಳ ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಚರಿಗೊಂದು ಕ್ಯಾಲೆಂಡರ್‌ ಹೊರತಂದಿದ್ದಾರೆ.ಕೊಪ್ಪಳ: ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಚರಿಗೊಂದು ಕ್ಯಾಲೆಂಡರ್‌ ಹೊರತಂದಿದ್ದಾರೆ.

ವಿದ್ಯಾರ್ಥಿಗಳು ಮನೆಯಲ್ಲಿ ಮಾಡಬೇಕಾದ ಚಟುವಟಿಕೆಗಳನ್ನು ಕ್ಯಾಲೆಂಡರ್‌ನಲ್ಲಿ ವಿವರಿಸಲಾಗಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ವಿದ್ಯಾರ್ಥಿ ಮನೆಯಲ್ಲಿ ಬೆಳಿಗ್ಗೆ 5ರಿಂದ 9.30 ಮತ್ತು ಸಂಜೆ 5.30ರಿಂದ ರಾತ್ರಿ 10ರವರೆಗೆ ಮಾಡಬೇಕಾದ ಚಟುವಟಿಕೆಗಳ ಸೂಚನೆಗಳು ಇದರಲ್ಲಿವೆ.
ಸಾಹಿತಿ ಪ್ರಮೋದ ತುರ್ವಿಹಾಳ ಅವರು ಸೋಮವಾರ ಈ ದಿನಚರಿಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ದಿನಚರಿ ಸಾರಾಂಶ:  ಬೆಳಿಗ್ಗೆ 5ಕ್ಕೆ ಏಳುವುದು, ನಿತ್ಯಕರ್ಮ, ಏಕಾಗ್ರತೆ, ಇಂಗ್ಲಿಷ್‌, ಕನ್ನಡ, ಗಣಿತ ಅಧ್ಯಯನ, ಸ್ನಾನ, 9.30ರಿಂದ ಶಾಲಾ ಚಟುವಟಿಕೆ ಸಂಜೆ 5.30ರಿಂದ ಮನೆಗೆಲಸ, ವಿಶ್ರಾಂತಿ, ಆಟ, ಇತರ ಕೆಲಸ, 6.30ರಿಂದ ಸಮಾಜ ಅಧ್ಯಯನ, 7.30ರಿಂದ ವಿಜ್ಞಾನ, ಹಿಂದಿ ಅಧ್ಯಯನ, ಹೋಂವರ್ಕ್, ರಾತ್ರಿ 10ಕ್ಕೆ ನಿದ್ದೆ ಮಾಡುವುದು. ಶನಿವಾರ, ಭಾನುವಾರದ ಚಟುವಟಿಕೆಗಳನ್ನೂ  ವೇಳಾಪಟ್ಟಿಯಲ್ಲಿ ನೀಡಲಾಗಿದೆ.

ದಿನಚರಿ ಬಗ್ಗೆ ವಿವರಿಸಿದ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಮತ್ತು ಮುಖ್ಯಶಿಕ್ಷಕಿ ರೇಣುಕಾ ಅತ್ತನೂರ, ‘ಮನೆಯು ಮಗುವಿನ ಮೊದಲ ಪಾಠಶಾಲೆ. ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ನೀಡಬೇಕು. ಶಿಕ್ಷಕರೂ ಸಹ ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ’ ಎನ್ನುತ್ತಾರೆ.

ಶಾಲೆಯಲ್ಲಿ 650 ಮಕ್ಕಳು ಇದ್ದಾರೆ. ಈಚೆಗೆ ಹೊಸ ಕ್ಯಾಂಪಸ್‌ನಲ್ಲಿ ತರಗತಿ ಆರಂಭವಾಗಿವೆ. ಬಹದ್ದೂರ್‌ ಬಂಡಿ ಕೋಟೆಯ ಹಿನ್ನೆಲೆಯ ಸುಂದರ ಪರಿಸರದಲ್ಲಿ ಶಾಲೆ ಇದೆ. ಸಂಸ್ಥೆ ವಿದ್ಯಾರ್ಥಿಗಳು ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ  ಪಡೆಯುತ್ತಿದ್ದಾರೆ. ಕೇವಲ ಪಠ್ಯ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾರೆ. ಸ್ಕೌಟ್‌ ಮತ್ತು ಗೈಡ್ಸ್‌ನ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ ಎಂದು ಶಿಕ್ಷಕರು ಮಾಹಿತಿ ನೀಡಿದರು.

ಕ್ಯಾಲೆಂಡರ್‌ನಲ್ಲಿರುವ ಅಂಶಗಳನ್ನು ಶೇ 50ರಷ್ಟು ಮಕ್ಕಳಾದರೂ ಪಾಲಿಸಿದರೆ ಅತ್ಯುತ್ತಮ ಫಲಿತಾಂಶ ಸಾಧಿಸಬಹುದು. ಮಾತ್ರವಲ್ಲ ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಅವರ ಅಧ್ಯಯನ ವಿಧಾನಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಪೋಷಕರಿಗೂ ಸಲಹೆ ನೀಡುತ್ತಾರೆ. 22 ಶಿಕ್ಷಕರನ್ನು ವಿವಿಧ ತಂಡಗಳಾಗಿ ಮಕ್ಕಳ ಮನೆಗಳಿಗೆ ಕಳುಹಿಸಲಾಗುತ್ತದೆ. ವರ್ಷಕ್ಕೊಮ್ಮೆ ಎಲ್ಲ ಮಕ್ಕಳ ಮನೆಗಳಿಗೂ ಶಿಕ್ಷಕರ ಭೇಟಿ ಇರುತ್ತದೆ ಎಂದು ಆರ್‌.ಎಚ್‌. ಅತ್ತನೂರ ವಿವರಿಸಿದರು.

http://www.prajavani.net/news/article/2016/09/14/437885.html

Leave a Reply

Your email address will not be published. Required fields are marked *

*

Scroll To Top

Share this