ಬ್ರಿಟಿಷರ ಸಿಂಹ ಸ್ವಪ್ನ ನೇತಾಜಿ ಸುಭಾಸ್ ಚಂದ್ರ ಬೋಸ್ – ವಿಠ್ಠಪ್ಪ ಗೋರಂಟ್ಲಿ

ಬ್ರಿಟಿಷರ ಸಿಂಹ ಸ್ವಪ್ನ ನೇತಾಜಿ ಸುಭಾಸ್ ಚಂದ್ರ ಬೋಸ್ – ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಜ.೨೩ ರಂದು ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನೇತಾಜಿ ಸುಭಾಸ್‌ಚಂದ್ರ ಬೋಸ್‌ರವರ ೧೨೧ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ಬ್ರಿಟಿಷರ ಸಾಮಾಜ್ರ್ಯಕ್ಕೆ ಸಿಂಹ ಸ್ವಪ್ನರಾಗಿದ್ದವರು ಅದು ಬೋಸ್ ಒಬ್ಬರೇ ಇಂತಹ ವ್ಯಕ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದ್ದರು ಇವರು ತಮ್ಮ ೫ನೇ ವಯಸ್ಸಿನಲ್ಲಿ ಇಂಗ್ಲಿಷ ವಿಷಯದಲ್ಲಿ ಪ್ರೌಢಮೆಯನ್ನು ಹೊಂದಿದ್ದರು. ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಹಾಗೂ ರಾಮಕೃಷ್ಣ ಪರಮಹಂಸರ ವಿಚಾರಗಳಿಂದ ಪ್ರಭಾವಿತರಾಗಿದ್ದರು.
ನೇತಾಜಿಯವರು ಮಾರು ವೇಷಗಳನ್ನು ಧರಿಸಿಕೊಂಡು ಬ್ರಿಟಿಷರಿಂದ ತಪ್ಪಿಸಿಕೊಂಡು ಬೇರೆ ಬೇರೆ ದೇಶಗಳಿಗೆ ಸಂಚರಿಸಿ ಸೈನ್ಯವನ್ನು ಸಂಘಟಿಸುತ್ತಿದ್ದರು. ಇದರ ಜೊತೆಗೆ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದರು ಅಲ್ಲದೇ ಭಾರತೀಯರನ್ನು ಎಚ್ಚರಿಸಲು ಪಾವರ್ಡ ಎಂಬ ಪತ್ರಿಕೆಯನ್ನು ಪ್ರಕಟಿಸಿದ್ದರು. ಇಂತಹ ನೇತಾಜಿ ಸುಭಾಷಚಂದ್ರ ಬೋಸ್‌ರವರು ೧೯೪೫ ಅಗಷ್ಟ ೧೮ ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟರು ಇಂತಹ ಮಾಹನ್ ವ್ಯಕ್ತಿಯ ಜೀವನ ಚರಿತ್ರೆಯನ್ನು ಓದಿ ನಿಮ್ಮ ಜೀವನದಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್. ಹೆಚ್.ಅತ್ತನೂರ, ಗ್ರಾ.ಪಂ ಸದಸ್ಯ ನಜೀರ ಅಹ್ಮದ, ರೇಣುಕಾ ಅತ್ತನೂರ, ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಕ ಜಿ.ಎಸ್. ಹಿರೇಗೌಡ್ರು ನಿರೂಪಿಸಿದರು, ದೇವಪ್ಪ ಸ್ವಾಗತಿಸಿದರು ಕೊನೆಗೆ ಆಫ್ರೀನ್ ತಬಸ್ಸಮ್ ವಂದಿಸಿದರು.

Leave a Reply

Your email address will not be published. Required fields are marked *

*

Scroll To Top

Share this