ಗಿಡ-ಮರಗಳನ್ನು ಮಕ್ಕಳಂತೆ ಕಾಪಾಡಿ ಬೆಳೆಸಬೇಕು: ಡಿಸಿ ಕನಗವಲ್ಲಿ

ಗಿಡ-ಮರಗಳನ್ನು ಮಕ್ಕಳಂತೆ ಕಾಪಾಡಿ ಬೆಳೆಸಬೇಕು: ಡಿಸಿ ಕನಗವಲ್ಲಿ

ನಗರದ ಬಹಾದ್ದೂರ ಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಇಂದಿನ ಮಕ್ಕಳು ನಾಳೆ ಬೆಳೆದು ದೊಡ್ಡವರಾಗುತ್ತಾರೆ. ಅವರಿಗೆ ನಾವು ಯಾವ ಪರಿಸರ ನೀಡುತ್ತಿದ್ದೇವೆ ಎನ್ನುವುದನ್ನು ಯೋಚಿಸಬೇಕು. ಮಕ್ಕಳೂ ಸಹ ತಮ್ಮ ಮನೆಯ ಸುತ್ತಮುತ್ತ ಗಿಡಮರಗಳನ್ನು ನೆಡುವ ಮತ್ತು ಅವುಗಳನ್ನು ಕಾಳಜಿಯಿಂದ ಬೆಳೆಸುವ ಕೆಲಸ ಮಾಡಬೇಕು ಹಸಿರಿನಿಂದ ಕೂಡಿದ ವಾತಾವರಣ ಇದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತೆ. ಯಾಂತ್ರಿಕ ಬದುಕಿಗಿಂತ ನಿಸರ್ಗದೊಡನೆ ಬದುಕುವುದು ಉತ್ತಮ. ಹೀಗಾಗಿ ಮಕ್ಕಳೂ ಸಹ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಶಾಲೆಯ ಆವರಣದಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸೌಟ್ಸ್‌ ಅಂಡ್‌ ಗೈಡ್ಸ್‌‌ನ ಜಿಲ್ಲಾ ಆಯುಕ್ತೆ ಸಂಧ್ಯಾ ಮಾದಿನೂರ್, ಚಾಂದಪಾಷಾ ಕಿಲ್ಲೆದಾರ, ಜಯರಾಜ ಬೂಸದ, ಆರ್.ಎಚ್.ಅತ್ತನೂರ, ಗ್ರಾಮ ಪಂಚಾಯತ್ ಸದಸ್ಯ ಬಾಬುಸಾಬ, ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*

Scroll To Top

Share this