Category Archives: ಸಾಂಸ್ಕೃತಿಕ ಕಾರ್ಯಕ್ರಮಗಳು

ಶಾಲಾ ಮಕ್ಕಳ ಅಭ್ಯಾಸಕ್ಕೊಂದು ದಿನಚರಿ

ಕೊಪ್ಪಳ: ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಪ್ರಯೋಗ ಕೊಪ್ಪಳ ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಚರಿಗೊಂದು ಕ್ಯಾಲೆಂಡರ್‌ ಹೊರತಂದಿದ್ದಾರೆ.ಕೊಪ್ಪಳ: ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಚರಿಗೊಂದು ಕ್ಯಾಲೆಂಡರ್‌ ಹೊರತಂದಿದ್ದಾರೆ. ವಿದ್ಯಾರ್ಥಿಗಳು ಮನೆಯಲ್ಲಿ ಮಾಡಬೇಕಾದ ಚಟುವಟಿಕೆಗಳನ್ನು ಕ್ಯಾಲೆಂಡರ್‌ನಲ್ಲಿ ವಿವರಿಸಲಾಗಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ವಿದ್ಯಾರ್ಥಿ ಮನೆಯಲ್ಲಿ ಬೆಳಿಗ್ಗೆ 5ರಿಂದ 9.30 ಮತ್ತು ಸಂಜೆ 5.30ರಿಂದ ರಾತ್ರಿ 10ರವರೆಗೆ ಮಾಡಬೇಕಾದ ಚಟುವಟಿಕೆಗಳ ಸೂಚನೆಗಳು ಇದರಲ್ಲಿವೆ. ಸಾಹಿತಿ ಪ್ರಮೋದ ತುರ್ವಿಹಾಳ ಅವರು ಸೋಮವಾರ ಈ ... Read More »

‘ಸೃಜನಶೀಲತೆಗೆ ಪಠ್ಯೇತರ ಚಟುವಟಿಕೆ ಅವಶ್ಯಕ’

ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಯೋಚಿಸಬೇಕು ಎಂದು ಯುವ ಮುಖಂಡ ಅಮರೇಶ ಕರಡಿ ಹೇಳಿದರು. ಕೊಪ್ಪಳ:  ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು, ಶಿಕ್ಷಕರು ಯೋಚಿಸಬೇಕು ಎಂದು ಯುವ ಮುಖಂಡ ಅಮರೇಶ ಕರಡಿ ಹೇಳಿದರು. ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಅಂಕಗಳ ಹಿಂದೆ ಬಿದ್ದು, ಪಠ್ಯೇತರ ... Read More »

ಗಿಡ-ಮರಗಳನ್ನು ಮಕ್ಕಳಂತೆ ಕಾಪಾಡಿ ಬೆಳೆಸಬೇಕು: ಡಿಸಿ ಕನಗವಲ್ಲಿ

ನಗರದ ಬಹಾದ್ದೂರ ಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.   ಇಂದಿನ ಮಕ್ಕಳು ನಾಳೆ ಬೆಳೆದು ದೊಡ್ಡವರಾಗುತ್ತಾರೆ. ಅವರಿಗೆ ನಾವು ಯಾವ ಪರಿಸರ ನೀಡುತ್ತಿದ್ದೇವೆ ಎನ್ನುವುದನ್ನು ಯೋಚಿಸಬೇಕು. ಮಕ್ಕಳೂ ಸಹ ತಮ್ಮ ಮನೆಯ ಸುತ್ತಮುತ್ತ ಗಿಡಮರಗಳನ್ನು ನೆಡುವ ಮತ್ತು ಅವುಗಳನ್ನು ಕಾಳಜಿಯಿಂದ ಬೆಳೆಸುವ ಕೆಲಸ ಮಾಡಬೇಕು ಹಸಿರಿನಿಂದ ಕೂಡಿದ ವಾತಾವರಣ ಇದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತೆ. ಯಾಂತ್ರಿಕ ಬದುಕಿಗಿಂತ ನಿಸರ್ಗದೊಡನೆ ಬದುಕುವುದು ಉತ್ತಮ. ಹೀಗಾಗಿ ಮಕ್ಕಳೂ ಸಹ ಇದರಲ್ಲಿ ಸಕ್ರಿಯವಾಗಿ ... Read More »

ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಸಂಭ್ರಮದ ಟಿಪ್ಪು ಜಯಂತಿ

ಕೊಪ್ಪಳ: ೨೬೭ನೇ ಟಿಪ್ಪು ಜಯಂತಿಯನ್ನು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ರ ಭಾವಚಿತ್ರಕ್ಕೆ ಪುಷ್ಪಾರ್ಪಣೆಮಾಡುವ ಮೂಲಕ ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಒಬ್ಬ ವೀರ ರಾಜನಾಗಿದ್ದ ಬ್ರಿಟಿಷರ ಜೊತೆ ನಿರಂತರವಾಗಿ ೪ ಯುದ್ದಗಳನ್ನು ಮಾಡಿ ಅವರನ್ನು ಭಾರತದಿಂದ ಹೊಡೆದೋಡಿಸಲು ಪ್ರಯತ್ನಿಸಿದ ರಾಜ. ಟಿಪ್ಪು ಸುಲ್ತಾನ್ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ. ರಾಷ್ಟ್ರರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟಂತ ಧೀಮಂತ ತ್ಯಾಗಮಯಿ ರಾಜ. ಹಲವಾರು ಜನಪರ ಯೋಜನೆಗಳನ್ನು ... Read More »

ಸ್ಥಬ್ದಚಿತ್ರ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಮಂದಿರ ಶಾಲೆಗೆ ಪ್ರಥಮ ಪ್ರಶಸ್ತಿ.

ಕೊಪ್ಪಳ-01- ೬೦ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಸ್ಥಬ್ದಚಿತ್ರ ಸ್ಪರ್ಧೆಯಲ್ಲಿ ನಗರದ ಸರಸ್ವತಿ ವಿದ್ಯಾಮಂದಿರ ಶಾಲೆಯ ಭುವನೇಶ್ವರಿ ದೇವಿಯ ಸ್ತಬ್ಧ ಚಿತ್ರ ಪ್ರಥಮ ಬಹುಮಾನ ಪಡೆದಿದೆ.  ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆ ಮತ್ತು ಇಲಾಖೆಗಳ ೧೫ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು ಭಾಗವಹಿಸಿದ್ದವು  ಇದರಲ್ಲಿ ಸರಸ್ವತಿ ವಿದ್ಯಾಮಂದಿರದ ಭುವನೇಶ್ವರಿ ದೇವಿಯ ಸ್ಥಬ್ದ ಚಿತ್ರ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ. ಸ್ತಬ್ಧಚಿತ್ರದಲ್ಲಿ ರಾಜ್ಯದ ಸಾಂಸ್ಕೃತಿಕ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ವಿವಿಧ ವೇಷಭೂಷಣಗಳಾದ ಭುವನೇಶ್ವರಿ, ಸಂಗೋಳ್ಳಿ ರಾಯಣ್ಣ , ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ... Read More »

ಸರಸ್ವತಿ ವಿದ್ಯಾಮಂದಿರ ೬೪ ನೆ ಗಣರಾಜ್ಯ ದಿನಾಚರಣೆ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೪ ನೇ ಗಣರಾಜ್ಯ ದಿನಾಚರಣೆ ಆಚಚರಿಸಲಾಯಿತು. ಕಾರ್ಯಕ್ರಮದಲ್ಲಿ ೬೪ ನೆ ಗಣರಾಜ್ಯ ದಿನಾಚರಣೆಯ ಧಜಾರೋಹಣ ಕಾರ್ಯಕ್ರಮವನ್ನು ನೆರವೆರಿಸಿ ಆರ್. ಎಚ್. ಅತ್ತನೂರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಕೊಪ್ಪಳ ಇವರು ಗುಲಾಮಗಿರಿಯಲ್ಲಿ ಬೆಂದು ಹೋಗಿದ್ದ ಭಾರತೀಯರಿಗೆ ಸುವ್ಯವಸ್ಥಿತವಾದ ಒಂದು ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿ ಪ್ರತಿಯೊಬ್ಬ ಭಾರತಿಯರಿಗೂ ಅವರದೆ ಆದ ಹಕ್ಕು ಮತ್ತು ಕರ್ತವ್ಯಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ನಾಗರಾಜ ಪಾಮೇಶ ಡಿ. ಕೊಟ್ರೇಶ ... Read More »

ಸರಸ್ವತಿ ವಿದ್ಯಾಮಂದಿರ ಮಕ್ಕಳ ದಿನಾಚರಣೆ

    ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಂ ವಿದ್ಯಾರ್ಥಿನಿ ಕು.ಮೇಘಾನಾ ಆನಂದ ಜವಾಹರಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೆಹರು ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಆದ್ದರಿಂದ ಅವರ ಆದರ್ಶವನ್ನು ಶಿಸ್ತು ಸಂಯಮ ಸೌಹಾರ್ದತೆಯಿಂದ ಬೆಳಸಿಕೊಂಡು ಅವರ ಕನಸು ನನಸು ಮಾಡೋಣ ದೇಶ ಸೇವೆಗೆ ನಮ್ಮ ನಮ್ಮ ಕೈಲಾದಷ್ಟು ಮುಂದಾಗೋಣ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಪ್ರತಾಪ ನಿಶಾ ಅತ್ತನೂರ ವೀರಪ್ಪ ಮಹಾಲಕ್ಷ್ಮಿ ಕುಂಬಾರ, ರಾಜೇಶ ಓಜನಹಳ್ಳಿ, ಸ್ವಪ್ನಾ ಬೆಲ್ಲದ ತಿರ್ಥೇಶ ... Read More »

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಂಬಿಗರ ಚೌಡಯ್ಯಯನವರ ಜಯಂತಿ ಆಚರಣೆ

ಕೊಪ್ಪಳ :-   ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶರಣ ಧರ್ಮದ ಕಿರ್ತಿ ಪತಾಕೆಯನ್ನು ಎತ್ತಿ ಹಿಡಿದ ಅಂಬಿಗರ ಚೌಡಯ್ಯನವರ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದಂತಹ  ಆರ್.ಹೆಚ್.ಅತ್ತನೂರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಇವರು ಶರಣ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ ಅನರ್ಘ್ಯ  ರತ್ನಗಳಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರವಾದುದ್ದು. ಅವರ ವಿಚಾರ ಧಾರೆಗಳು ಸಮಾಜಕ್ಕೆ ಸಾರ್ವಕಾಲಿಕವಾದವಗಳು ಅಂತಹ ಆದರ್ಶಗಳನ್ನು ಅಳವಡಿಸಿಕೊಳ್ಳಿರಿ ಎಚಿದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಜಯಶ್ರೀ ಕುಕರ್ಣಿಯವರು ಅಂಬಿಗರ  ಚೌಡಯ್ಯಯನವರ ... Read More »

ಇಲಿಯಾಗಿ ಬದುಕುವುದಕ್ಕಿಂತ ಹುಲಿಯಾಗಿ ಬಾಳಬೇಕು-ರೇಣುಕಾ ಅತ್ತನೂರ

ಕೊಪ್ಪಳ : ಟಿಪ್ಪು ಸುಲ್ತಾನ ತನ್ನ ಜೀವಿತಾವಧಿಯವರೆಗೆ ಹುಲಿಯಾಗಿ ಬದುಕಿದಂತಹ ವ್ಯಕ್ತಿ, ಅಂತವರ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾಸ್ಯದಿಂದ ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಲೇಸು ಎಂದು ಸರಸ್ವತಿ ವಿದ್ಯಾಮಂದಿರದ ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ ಹೇಳಿದರು. ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಟಿಪ್ಪುಸುಲ್ತಾನರ ಜಯಂತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಟಿಪ್ಪು ಸುಲ್ತಾನ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ‍್ಯಕ್ರಮ ಚಾಲನೆ ನೀಡಿದ ಕೊಪ್ಪಳ ಪೂರ್ವವಲಯದ ಸಿಆರ್‌ಪಿ ಶ್ರೀಮತಿ ಪೂರ್ಣಿಮಾ -ವೀರ ... Read More »

ಸರಸ್ವತಿ ವಿದ್ಯಾಮಂದಿರದಲ್ಲಿ ಮೈಸೂರ ಹುಲಿ ಟಿಪ್ಪು ಸುಲ್ತಾನ ಜಯಂತಿ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮೈಸೂರ ಹುಲಿ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು.  ಕಾರ‍್ಯಕ್ರಮಕ್ಕೆ ಮೈಸೂರ ಹುಲಿ ಟಿಪ್ಪು ಸುಲ್ತಾನರವರ ಭಾವಚಿತ್ರಕ್ಕೆ ಎಂ.ಡಿ.ಜಿಲಾನ್ ಜಿಲ್ಲಾಧ್ಯಕ್ಷರು ಟಿಪ್ಪು ಸುಲ್ತಾನ ಸಂಘ ಇವರು ಪುಷ್ಪಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಟಿಪ್ಪು ಸುಲ್ತಾನ್ ರ ಆದರ್ಶ ಗುಣಗಳು,ಅವರಲ್ಲಿದ್ದ ದೈರ್ಯ,ಸಾಹಸಗಳು ನಮ್ಮ ನಿಮ್ಮೆಲ್ಲರಲ್ಲಿ ಬೆಳೆಸಿಕೊಂಡು ಸಮಾಜದ ಏಳಿಗೆಗಾಗಿ ಹೋರಾಡಬೇಕು. ಅವರ ದೇಶಪ್ರೇಮ,ಕನ್ನಡ ಪ್ರೇಮ ಎಲ್ಲರಲ್ಲಿ ಮೂಡಿಬರಬೇಕು ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರ – ಟಿಪ್ಪು ... Read More »

Scroll To Top

Share this